Loading the player...


INFO:
ಭಾರತ ನನ್ನ ಮಾತೃಭೂಮಿಯಾಗಿದ್ದರೂ ನಾನು ಅಲ್ಲಿಗೆ ಹೋಗಲಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನಿಶ್ ಕನೇರಿಯಾ ಹೇಳಿದ್ದಾರೆ. ಅವರು ಇತ್ತೀಚೆಗೆ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಿದ್ದರು. ಭಾರತವನ್ನು ಟೀಕಿಸುವ ಪಾಕಿಸ್ತಾನ ಕ್ರಿಕೆಟಿಗರನ್ನು ಟೀಕಿಸುತ್ತಿದ್ದರು. ಭಾರತೀಯ ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ತೋರಿದಾಗ ಅವರನ್ನು ಶ್ಲಾಘಿಸುತ್ತಿದ್ದರು. ಆಗೆಲ್ಲಾ ಇವರು ಭಾರತಕ್ಕೆ ಹೋಗಿ ನೆಲೆಸಲು ಬಯಸಿದ್ದಾರೆ. ಹಾಗಾಗಿ, ಅಲ್ಲಿ ಪೌರತ್ವ ಗಿಟ್ಟಿಸಿಕೊಳ್ಳಲು ಹೀಗೆಲ್ಲಾ ಭಾರತ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ, ಕನೇರಿಯಾ ಅವರು ಅದನ್ನು ಅಲ್ಲಗಳೆದಿದ್ದಾರೆ.
Danish Kaneria Origin,"ಭಾರತ ನನ್ನ ಮಾತೃಭೂಮಿ, ಆದರೆ ಅಲ್ಲಿಗೆ ಹೋಗಲಾರೆ" - ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಸ್ಪಷ್ಟನೆ - india my mathrubhumi but can’t go there says pakistan former cricketer danish kaneria - vijaykarnataka