Loading the player...


INFO:
ಪ್ರಾರಂಭಕ್ಕೂ ಮುನ್ನವೇ ಹೈಡ್ರಾಮಾ, ವಿವಾದಗಳಿಂದ ಕೇಂದ್ರಬಿಂದುವಾಗಿದ್ದ ಈ ಬಾರಿಯ ಚಾಂಪಿಯನ್ಸ್‌ ಟೂರ್ನಿಯಲ್ಲಿ ಭಾರತ ವಿಜಯದ ಪತಾಕೆ ಹಾರಿಸಿದೆ. 1996ರ ವಿಶ್ವಕಪ್‌ ಬಳಿಕ ಪಾಕಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿತ್ತು. ಆದರೆ ಭದ್ರತೆಯ ಕಾರಣ ಮುಂದಿಟ್ಟು ಟೀಂ ಇಂಡಿಯಾ ಪಾಕಿಸ್ತಾನ ಪ್ರವೇಶಿಸಲು ಒಪ್ಪಿರಲಿಲ್ಲ. ಹೀಗಾಗಿ ಭಾರತದ ಪಂದ್ಯಗಗಳು ದುಬೈನಲ್ಲಿ ಆಯೋಜನೆಗೊಂಡಿದ್ದವು. ಭಾರತ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರಿಂದ ಅಂತಿಮವಾಗಿ, ಫೈನಲ್‌ ಪಂದ್ಯವೂ ದುಬೈನಲ್ಲೇ ನಡೆಯಿತು. ಇದು ಪಾಕ್‌ ಕ್ರಿಕೆಟ್‌ ಮಂಡಳಿಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.
ಐಸಿಸಿ ವಿರುದ್ಧ ಪಿಸಿಬಿ ಅಸಮಾಧಾನ,Champions Trophy: ಪ್ರಶಸ್ತಿ ಪ್ರದಾನ ವೇದಿಕೆಗೆ ಆಹ್ವಾನ ಯಾಕಿಲ್ಲ? ಐಸಿಸಿ ವಿರುದ್ಧ ಪಿಸಿಬಿ ಅಸಮಾಧಾನ - pakistan officials absent from icc champions trophy 2025 closing ceremony - vijaykarnataka