Loading the player...


INFO:
ಜೂ. 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ಒದಗಿಸಿದ್ದ ಅಮೆರಿಕ ನ್ಯೂಯಾರ್ಕ್ ನಗರದ ನುಸ್ಸಾವ್ ಕಂಟ್ರಿ ಕ್ರೀಡಾಂಗಣವನ್ನು ಜೂ. 14ರಂದು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಅಲ್ಲೊಂದು ಸಾಮಾನ್ಯ ಮೈದಾನವಿದ್ದು, ಇದೇ ವರ್ಷವಷ್ಟೇ ಅಲ್ಲಿ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಟಿ20 ವಿಶ್ವಕಪ್ ಗಾಗಿಯೇ ಈ ಸಾಮಾನ್ಯ ಮೈದಾನವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ತಾತ್ಕಾಲಿಕ ಕ್ರೀಡಾಂಗಣವನ್ನಾಗಿ ಬದಲಾಯಿಸಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹಾಗೂ ನ್ಯೂಯಾರ್ಕ್ ನಗರದ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಮೈದಾನದ ಸುತ್ತಲೂ ನಿರ್ಮಿಸಲಾಗಿದ್ದ ಪ್ರೇಕ್ಷಕರ ಗ್ಯಾಲರಿಗಳು, ಆಟಗಾರರ ಕೋಣೆಗಳು, ಫ್ಲೆಡ್ ಲೈಟ್ ಗಳೆಲ್ಲವನ್ನೂ ಕಳಚಲಾಗುತ್ತದೆ.
ಭಾರತ ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ 2024,ಭಾರತ, ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ನಡೆದಿದ್ದ ನಸ್ಸಾವ್ ಕ್ರೀಡಾಂಗಣ ಜೂ. 14ರಂದು ನೆಲಸಮ! ಯಾಕೆ? - the modular nassau county stadium in new york which hosted india pak t20 wc match on jun 9, 2024 to be demolished - vijaykarnataka